ಸೋಮೇಶ್ವರ ದೇವಾಲಯ ಸಂಕೀರ್ಣವು ಕಿರಿದಾದ ಬೀದಿಗಳು ಮತ್ತು ಗಲ್ಲಿಗಳ ದಟ್ಟವಾದ ಜಾಲದ ನಡುವೆ ನಿಂತಿದೆ. ದೇವಾಲಯದ ಮಧ್ಯದ ಅಕ್ಷದ ಉದ್ದಕ್ಕೂ, ಹಾಗೂ ಮತ್ತೊಂದು ತುದಿಯಲ್ಲಿ ಕಳಶಪ್ರಾಯವಾದ ವೈಭವೋಪೇತವಾದ ಧ್ವಜಸ್ತಂಭ ಮತ್ತು ದೇವಾಲಯದ ಗೋಪುರದಿಂದ ಹಿಡಿದು, ಮತ್ತೊಂದು ತುದಿಯಲ್ಲಿರುವ ದೇವಾಲಯದ ರಥಕ್ಕೆ ಒಂದು ಬೀದಿಯು ದೇವಾಲಯದ ಮುಂಭಾಗದ ಕಡೆಗೆ ಸಂಪರ್ಕಿಸುತ್ತದೆ, ಐತಿಹಾಸಿಕವಾಗಿ, ಈ ಬೀದಿಯು ದೇವಾಲಯದಲ್ಲಿ ಸೇವೆ ಸಲ್ಲಿಸುವ ಅರ್ಚಕರಿಗೆ ಸೇರಿದ ಮನೆಗಳಿಂದ ಕೂಡಿತ್ತು ಎಂದು ಹೇಳಲಾಗುತ್ತದೆ; ಇಂದು, ಅವುಗಳ ಬದಲಾಗಿ ಅಲ್ಲಿ ಎತ್ತರದ ಕಟ್ಟಡಗಳು ನಿಂತಿವೆ. ದೇವಾಲಯದ ಈಶಾನ್ಯಕ್ಕಿರುವ ಕಲ್ಯಾಣಿಯು ಒಂದು ಕಾಲದಲ್ಲಿ ದೇವಾಲಯದ ಆಚರಣೆಗಳ ಪ್ರಮುಖ ಭಾಗವಾಗಿತ್ತು. ದೇವಾಲಯದ ಉತ್ತರ ಬೀದಿಯನ್ನು ರಥ ಬೀದಿ ಎಂದು ಹೆಸರಿಸಲಾಗಿದೆ, ಏಕೆಂದರೆ ಕೆಲವು ಉತ್ಸವಗಳ ಸಮಯದಲ್ಲಿ ದೇವಾಲಯದ ರಥವು ಈ ವಿಶಾಲವಾದ ಬೀದಿಯಲ್ಲಿ ಹೊರಡುತ್ತದೆ. ಈ ಬೀದಿಯಲ್ಲಿ ಇನ್ನೂ ಇರುವ ಕೆಲವು ಗತಕಾಲದ ತುಣುಕುಗಳಾದ ಜಗಲಿಗಳು ಮತ್ತು ‘ಮಂಕಿ ಟಾಪ್’ಗಳನ್ನು ಹೊಂದಿದ ಹಳೆಯ, ಸಾಂಪ್ರದಾಯಿಕ ಮನೆಗಳು ವೇಗವಾಗಿ ಅಳಿಸಿ ಹೋಗುತ್ತಿರುವ ದೇವಾಲಯದ ದಕ್ಷಿಣಕ್ಕೆ ಸದಾ ಕಾರ್ಯನಿರತವಾಗಿರುವ ಬಜಾರ್ ಸ್ಟ್ರೀಟ್, ಅಲಂಕಾರಿಕ ವಸ್ತುಗಳು, ಆಭರಣಗಳು, ಉಡುಪುಗಳು ಮತ್ತು ಅನೇಕ ವೈವಿಧ್ಯಮಯ ವಸ್ತುಗಳ ಮಾರಾಟ ಮಾಡುವ ಅಂಗಡಿಗಳಿಂದ ಕೂಡಿದೆ.