ಸೋಮೇಶ್ವರ ದೇಗುಲ - ಹಲಸೂರು

ಹಲಸೂರಿನ ಸೋಮೇಶ್ವರ ದೇವಾಲಯವು ಬೆಂಗಳೂರಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಐತಿಹ್ಯದ ಪ್ರಕಾರ, ಪಾಳೆಯಗಾರ ಕೆಂಪೇಗೌಡ ಒಮ್ಮೆ ಇಲ್ಲಿ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದಾಗ ಸೋಮೇಶ್ವರ ದೇವರು ಕನಸಿನಲ್ಲಿ ಕಾಣಿಸಿಕೊಂಡು, ಹುದುಗಿಸಿಟ್ಟ ಸಮಾಧಿ ನಿಧಿಯನ್ನು ಬಳಸಿ, ತನ್ನ ಗೌರವಾರ್ಥವಾಗಿ ದೇವಾಲಯವನ್ನು ನಿರ್ಮಿಸಲು ಸೂಚಿಸಿದರು. ಕೆಂಪೇಗೌಡರು ನಿಧಿಯನ್ನು ಹೊರತೆಗೆದು, ತಮ್ಮ ಕನಸಿನ ಪ್ರಕಾರ, ದೇವಾಲಯವನ್ನು ನಿರ್ಮಿಸಿದರು.

ದೇವಾಲಯ ಅಸ್ತಿತ್ವಕ್ಕೆ ಬಂದ ನಿಖರವಾದ ದಿನಾಂಕವನ್ನು ನಿರ್ಧರಿಸಲು ನಮಗೆ ನೆರವಾಗುವಂತಹ ಶಿಲಾಶಾಸನಗಳು ನಂತರದ ನವೀಕರಣಗಳಿಂದ ಮರೆಮಾಚಲ್ಪಟ್ಟಿವೆ ಅಥವಾ ಅಸ್ತಿತ್ವದಲ್ಲಿಲ್ಲ. ಆದರೂ, ವಾಸ್ತುಶಿಲ್ಪದ ಶೈಲಿಗಳು ಮತ್ತು ಸನ್ನಿವೇಶದ ಆಧಾರದ ಮೇಲೆ, ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ಎಸ್‌ಕೆ ಅರುಣಿ ಅವರು ದೇವಾಲಯದ ಗರ್ಭಗೃಹ, ಮುಖಮಂಟಪ ಮತ್ತು ನವರಂಗ ಮಂಟಪ ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಈ ಪ್ರದೇಶವನ್ನು ಆಳಿದ ಚೋಳರ ನಿರ್ಮಾಣ ಶೈಲಿಯಲ್ಲಿ ಇರುವುದಾಗಿ ಹೇಳಿದ್ದಾರೆ. ನಂತರದ ಶತಮಾನಗಳಲ್ಲಿ, ದೇವಾಲಯವು ಮಹಾ ಮಂಟಪ, ಗೋಪುರ ಮತ್ತು ಹಲವಾರು ಇತರ ಅಂಶಗಳನ್ನು ಸೇರ್ಪಡೆಯೊಂದಿಗೆ ವಿಸ್ತಾರಗೊಂಡಿತು.

ದೇವಾಲಯದ ಸಂಕೀರ್ಣದಲ್ಲಿ ಇತ್ತೀಚಿನ ಸಿವಿಲ್ ಕಾಮಗಾರಿಗಳು ನಡೆಯುತ್ತಿದ್ದಾಗ, ದೇವತೆಯ ಮುರಿದ ಮುರಿದ ಶಿಲ್ಪವು ಕಣ್ಣಿಗೆ ಕಾಣಿಸಿತು/ಗೋಚರವಾಯಿತು. ತಜ್ಞರು ಇದು ಗಂಗರ ಕಾಲಕ್ಕೆ (5 ರಿಂದ 10ನೆ CE) ಸೇರಿದೆ ಎಂದು ನಂಬುತ್ತಾರೆ - ಇದು ದೇವಾಲಯದ ಪ್ರಾಚೀನತೆಗೆ ಮತ್ತಷ್ಟು ಸಾಕ್ಷಿಗಳನ್ನು ಒದಗಿಸಿದೆ.

ಬೆಂಗಳೂರಿನ ಹೃದಯಭಾಗದಲ್ಲಿರುವ ಈ ಅಪ್ರತಿಮ ಶ್ರೀಮಂತ ಇತಿಹಾಸದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಮುಂದೆ ಓದಿ.

ಈ ಸಹಸ್ರಮಾನದ ಹಳೆಯ ದೇವಾಲಯದ
ವೈಭವವನ್ನು ಅನುಭವಿಸಿ.

360 ಡಿಗ್ರಿಯಲ್ಲಿ ಅದನ್ನು ಈಗ ವೀಕ್ಷಿಸಿ
  • 360 ಡಿಗ್ರಿ ವೀಕ್ಷಣೆಗಾಗಿ ಅಂಶಗಳು
  • ಚಿತ್ರಗಳು ಹಾಗೂ ವೀಡಿಯೊಗಳಿಗಾಗಿ ಆಸಕ್ತಿಯ ಅಂಶಗಳು
ವಾಸ್ತುಶಿಲ್ಪದ ವೈಶಿಷ್ಟ್ಯಗಳು ಮತ್ತು ವಿವರಗಳ ಆಸಕ್ತಿದಾಯಕ ಮಿಶ್ರಣದೊಂದಿಗೆ ನಿರ್ಮಿಸಿದ ರೂಪಗಳ ಸಂಕೀರ್ಣ ಪದರಗಳು. ಕಟ್ಟಡ ನಿರ್ಮಾಣ ಶೈಲಿಯನ್ನು ಅನ್ವೇಷಿಸಿ.

ಡಿಸ್ಕವರ್ ಆರ್ಕಿಟೆಕ್ಚರ್

ದೈವಿಕ, ಅರೆ-ದೈವಿಕ, ಮಾನವ ಹಾಗೂ ಅದ್ಭುತ ಜೀವಿಗಳ ಮೋಡಿ ಮಾಡುವ ಜಗತ್ತು ಮತ್ತು ಕಲ್ಲಿನಲ್ಲಿ ಕೆತ್ತಿದ ಪುರಾಣ ಕಥೆಗಳು. ಶಿಲ್ಪವನ್ನು ಅನ್ವೇಷಿಸಿ/ಕಂಡುಕೊಳ್ಳಿರಿ.

ಅನ್ವೇಷಿಸಿ ಶಿಲ್ಪಕಲೆ

ಕಥೆಗಳು

ಈ ದೇವಾಲಯದ ಗೋಡೆಗಳು ಹಾಗೂ ಸ್ತಂಭಗಳನ್ನು ಜೀವಂತಗೊಳಿಸುವ, ಸಮೃದ್ಧವಾಗಿ ಕೆತ್ತಿದ ರೂಪಗಳು, ದಂತಕಥೆಗಳು, ಕಥೆಗಳು ಮತ್ತು ದೃಶ್ಯಗಳಲ್ಲಿ ತಲ್ಲೀನರಾಗಿ.

ಮತ್ತಷ್ಟು ಅನ್ವೇಷಿಸಿ

ಡಿಸ್ಕವರ್ ಕಥೆಗಳು

TOP