Rotate your device!

ದಕ್ಷಿಣದ ಗೋಡೆಯ ಮೇಲಿನ ಈ ಸಾಲು ಶಿಲ್ಪಗಳು ವಿವಿಧ ಪ್ರಾಣಿಗಳ ಮೇಲೆ (ಬಹುಶಃ ಯೋಗಾಸನಗಳನ್ನು ಪ್ರತಿನಿಧಿಸುವ) ಒಂಬತ್ತು ಮುನಿಗಳನ್ನು ಶಾಂತ ಭಂಗಿಗಳಲ್ಲಿ ತೋರಿಸಲಾಗಿದೆ.

ಕೆಲವು ಪುರಾಣ ಕಥೆಗಳ ಪ್ರಕಾರ, ಶಿವನ ಮಗ ಮತ್ಸ್ಯೇಂದ್ರನಾಥ, ಮಚೀಂದ್ರನಾಥ ಅಥವಾ ಮೀನನಾಥ ಗುರುಗಳಲ್ಲಿ ಹಿರಿಯರು. ಅವನ ಬಲಭಾಗದಲ್ಲಿ ಸಿಂಹದ ಮೇಲೆ ಕುಳಿತಿರುವ ನಾಥನಿದ್ದು, ಇದು ಬಹುಶಃ ಮತ್ಸ್ಯೇಂದ್ರನಾಥನ ಶಿಷ್ಯ ಮತ್ತು ನಾಥ ಯೋಗಿಗಳ ಪೈಕಿ ಅತ್ಯಂತ ಪ್ರಮುಖನಾದ ಗೋರಖನಾಥ ಇರಬಹುದು.

ಮತ್ಸ್ಯೇಂದ್ರನಾಥನ ಎಡಭಾಗದಲ್ಲಿ ಚೇಳಿನ ಮೇಲೆ ಕುಳಿತಿರುವ ನಾಥನಿದ್ದಾನೆ. ವಿದ್ವಾಂಸ ರಹಮತ್ ತರೀಕೆರೆ, ಅವರನ್ನು ಭೈರವನಾಥ ಎಂದು ಗುರುತಿಸುತ್ತಾರೆ. ಅವನ ಪಕ್ಕದಲ್ಲಿ, ಸುರುಳಿ ಸುತ್ತಿಕೊಂಡ ಹೆಡೆಯಿರುವ ನಾಗರದ ಮೇಲೆ ಕುಳಿತಿರುವ ನಾಗಾರ್ಜುನ ಅಥವಾ ಭುಜಂಗನಾಥ ಎಂದೂ ಕರೆಯಲ್ಪಡುವ ನಾಗಾನಾಥನಿದ್ದಾನೆ, ಜಿಂಕೆ/ಹುಲ್ಲೆಯ ಮೇಲೆ ಕುಳಿತಿರುವ ನಾಥನು ಬಹುಪಾಲು ಚೌರಂಗಿನಾಥನೆಂದು ತೋರುತ್ತದೆ.

ಹಂದಿ ಅಥವಾ ಕರಡಿ, ಇಲಿ, ಆಮೆ ಮತ್ತು ಮಿಶ್ರತಳಿಯ ಮಕರ ಅಥವಾ ಯಾಲಿಯ ಮೇಲೆ ಕುಳಿತಿರುವ ನಾಥರ ಗುರುತುಗಳು ನಮಗೆ ಈಗ ತಿಳಿದಿಲ್ಲ.

ತೆರೆದ ಮಂಟಪದ ಕೆಲವು ಕಂಭಗಳಲ್ಲಿ ಕೆಲವು ನಾಥರ ಚಿತ್ರಣಗಳನ್ನೂ ಸಹ ನೀವು ನೋಡಬಹುದು. ನವನಾಥರ ಸಂಪೂರ್ಣ ಅನುಕ್ರಮವನ್ನು ತೋರಿಸುವ ಏಕೈಕ ಮಧ್ಯಕಾಲೀನ ಭಾರತೀಯ ದೇವಾಲಯವೆಂದರೆ ಬೆಂಗಳೂರಿನ ಕಲಿಸಿಪಾಳ್ಯದಲ್ಲಿರುವ ಜಲಕಂಠೇಶ್ವರ ದೇವಾಲಯ.

ನವನಾಥರು

ಇಲ್ಲಿ ಅತ್ಯಂತ ಅಸಾಮಾನ್ಯವಾದ ಶಿಲ್ಪಗಳ ಸರಣಿಯು ನವನಾಥರ ಚಿತ್ರಣವಾಗಿದೆ, ಇದು ಆರಂಭಿಕ ಮಧ್ಯಕಾಲೀನ ಉತ್ತರ ಭಾರತದ ಶೈವ ದಾರ್ಶನಿಕರ ವಂಶಾವಳಿಯಾಗಿದ್ದು, ಹಠಯೋಗ ಮತ್ತು ರಸವಿದ್ಯೆಯ ಆರಂಭಿಕ ರೂಪಗಳಿಗೆ ಸಂಬಂಧ ಹೊಂದಿದ,