ಸ್ತಂಭದ ಸಭಾಂಗಣದಲ್ಲಿ, ನಂದಿಯ ಉತ್ತರದ (ಬಲಕ್ಕೆ) ಸ್ತಂಭಗಳ ಮೇಲೆ, ನೀವು ಗಂಡಭೇರುಂಡದ ಶಿಲ್ಪವನ್ನು ನೋಡುತ್ತೀರಿ: ಇದು ಮಾನವ ಕೈಗಳು ಮತ್ತು ಮುಂಡಗಳನ್ನು, ಪಂಜುಗಳು ಇರುವ ಕಾಲುಗಳನ್ನು ಹೊಂದಿದ ಎರಡು ತಲೆಯ ಪಕ್ಷಿಯಾಗಿದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಭಗವಾನ್ ಶಿವನ ಕ್ರೋಧಭರಿತ ಸಿಂಹ+ಮಾನವ+ಪಕ್ಷಿ ರೂಪವಾದ ಶರಭನನ್ನು ನಿಗ್ರಹಿಸಲು ಭಗವಾನ್ ವಿಷ್ಣುವು ಈ ರೂಪವನ್ನು ಧರಿಸಿದ್ದನು.

ಇಲ್ಲಿರುವ ಗಂಡಭೇರುಂಡವನ್ನು ವಂಶಲಾಂಛನ ಚಿಹ್ನೆಯಂತೆ ನಿರೂಪಿಸಲಾಗಿದೆ. ಅವನು/ ಅದು ಎರಡು ಆನೆಗಳನ್ನು ತುಳಿಯುತ್ತಾನೆ/ ತುಳಿಯುತ್ತದೆ

ಸೊಂಡಿಲಿನಿಂದ ಮತ್ತೆರಡನ್ನು ಹಿಡಿಯುತ್ತದೆ …. ಮತ್ತು ಅವನ/ ಅದರ ಕೊಕ್ಕಿನಲ್ಲಿ ಇನ್ನೂ ಎರಡು ಇದೆ.

ಅವನ/ ಅದರ ರೆಕ್ಕೆಗಳು ಅವನ/ಅದರ ಹಿಂದೆ ಪಟ್ಟೆ ಹಾಳೆಯಂತೆ ಹರಡಿದ್ದು, ಇದು ಸಂಯೋಜನೆಗೆ/ ಸಂರಚನೆಗೆ ಏಕತೆಯನ್ನು ನೀಡುತ್ತದೆ.

11ನೆಯ ಶತಮಾನದಿಂದಲೂ, ಕರ್ನಾಟಕದ ಶಿಲ್ಪಕಲೆ ಮತ್ತು ಕರಕುಶಲಗಳಲ್ಲಿ ಈ ಮಿಶ್ರತಳಿ ಪ್ರಾಣಿಯ ಚಿತ್ರವು ಅತ್ಯಂತ ಜನಪ್ರಿಯವಾಗಿದೆ. ವಿಜಯನಗರದ ಅರಸರು ನಾಣ್ಯಗಳ ಮೇಲ್ಮುಖದಲ್ಲಿ ಗಂಡಭೇರುಂಡ ಇರುವ ನಾಣ್ಯಗಳನ್ನು ಮುದ್ರಿಸುತ್ತಿದ್ದರು. ಮೈಸೂರಿನ ಒಡೆಯರೂ ಸೇರಿದಂತೆ, ಇದನ್ನು ಅನೇಕ ರಾಜವಂಶಗಳ ರಾಜ ಚಿಹ್ನೆಯಾಗಿ ಅಳವಡಿಸಿ ಕೊಂಡರು.

ಗಂಡಬೇರುಂಡ

ಮಾನವ ರೂಪದಲ್ಲಿ ಎರಡು ತಲೆಯ ಹದ್ದು