ಭೈರವನಾಥ ಎಂದು ಗುರುತಿಸಲಾದ ಈ ತಪಸ್ವಿಯ ಹಗುರವಾದ/ಬಳುಕುವ ರೂಪವು ಕಮಲದ ಭಂಗಿಯಲ್ಲಿ ದೊಡ್ಡ ಚೇಳಿನ ಮೇಲೆ ಕುಳಿತಿದ್ದು, ಬಹುಷಃ ಇದು ಯೋಗಾಸನ ಒಂದನ್ನು ಸೂಚಿಸುತ್ತದೆ.

ಆತನ ವಿಚಿತ್ರವಾದ/ ಚಂಚಲ ಮಂದಹಾಸದ ಮೂಲಕ, ಅವನ ಮುಖದ ಮೇಲಿನ ಬಾದಾಮಿ ಆಕಾರದ ಕಣ್ಣುಗಳು ಹಾಗೂ ಏರಿದ ಹುಬ್ಬುಗಳು ಅಭಿವ್ಯಕ್ತವಾಗಿ /ಪ್ರತಿಫಲಿಸಿ, ತಕ್ಷಣವೇ ವೀಕ್ಷಕರನ್ನು ಅವು ಸೂಸುವ ಬೆಚ್ಚಗಿನ ಭಾವನೆ ಹಾಗೂ ವಿನೋದದಿಂದ ಆಕರ್ಷಿಸುತ್ತದೆ.

ಕೋಮಲವಾದ ದುಂಡಗಿನ ಮುಖದ ಸುತ್ತಲೂ, ಹರಡಿದಂತರಿರುವ ಎರಡು-ಪದರದ ಜಟೆಯ ಜೊತೆಗೆ, ನಾಥರು ತೊಡುವ ವಿಶಿಷ್ಟವಾದ ದೊಡ್ಡ ಕಿವಿಯೋಲೆಗಳನ್ನು ಚಿತ್ರಿಸಲಾಗಿದೆ. ಧಾತುವಿನಿಂದ ಮಾಡಲಾದ ಕಂಠೀಹಾರವನ್ನ ಧರಿಸಿದ ತೆಳುವಾದ ಮುಂಡವು ಸ್ವಲ್ಪ ಅಸಮವಾಗಿದ್ದು, ಇದು ಶಿಲ್ಪದ ಜೀವಂತಿಕೆಯನ್ನು ಹೆಚ್ಚಿಸುತ್ತದೆ.

ಭೈರವನಾಥನ ಕೊಳವೆಯಾಕಾರದ ತೋಳುಗಳು ಹೊರಕ್ಕೆ ಬಾಗಿದ್ದು, ಅವನ ತೊಡೆಯ ಮೇಲೆ ವಿಶ್ರಮಿಸುತ್ತವೆ, ಮತ್ತು ಅವನ ಕಾಲುಗಳು ಬಿಗಿಯಾದ ಪದ್ಮಾಸನದಲ್ಲಿ ಪರಸ್ಪರ ಜೋಡಿಸಲ್ಪಟ್ಟಿವೆ.

ಅವನು ಕುಳಿತಿರುವ ಭಾರಿಯಾದ/ಭಾರಿ ಗಾತ್ರದ ಚೇಳಿನ ಮೇಲೆ ಉಬ್ಬಿದಂತಿರುವ ಮೇಲ್ಚಿಪ್ಪು/ಬೆನ್ನು ಚಿಪ್ಪಿನ ಮೇಲೆ, ಒಗ್ಗೂಡಿಸುವ ಉದ್ದದ ಉಬ್ಬಿನಿಂದ ಪೀನಾಕಾರದ ಅಡ್ಡ-ಉಬ್ಬುಗಳು ವಿಭಜಿಸುತ್ತವೆ. ಚೇಳಿನ ಕುಟುಕನ್ನು ಮೇಲಕ್ಕೆತ್ತಲಾಗಿದೆ ಮತ್ತು ವಿಷ ಗ್ರಂಥಿಯು ಯೋಗಿಯ ಬಲ ತೊಡೆಯ ಹತ್ತಿರ ಅಪಾಯಕಾರಿಯಾಗಿ ಸುಳಿದಾಡುತ್ತದೆ. ಚೇಳಿನ ಮೇಲ್ಚಿಪ್ಪಿನ ಲಯವು ನಾಥ ಮುಡಿಯ ಲಯದೊಂದಿಗೆ ಮರುದನಿಸುತ್ತಿದ್ದು, ಲಯಬದ್ಧವಾದ ಸಾಹಿತ್ಯ ಸಂಯೋಜನೆಯಂತೆ ಇದೆ.

ಭೈರವನಾಥ

ಮಂಟಪದ ಒಂದು ಕಂಭದ ಮೇಲೆ ಚೇಳಿನ ಮೇಲೆ ಕುಳಿತಿರುವ ನಾಥನ. ಜೀವಂತವಾಗಿ ಕಾಣುವ/ ಜೀವಕಳೆಯಿಂದ ತುಂಬಿದ ರತ್ನದಂತಹ ಮಧ್ಯದ ಉಬ್ಬು ಶಿಲ್ಪವಿದೆ.