ದೇಗುಲದ ಮಂಟಪದ ಪೂರ್ವ, ಉತ್ತರ ಮತ್ತು ದಕ್ಷಿಣದ ಪ್ರವೇಶದ್ವಾರಗಳ ಅಂಕಣಗಳಲ್ಲಿ ಕುದುರೆ ಸವಾರರು ಯಾಳಿಗಳನ್ನು ಸವಾರಿ ಮಾಡುತ್ತಾರೆ, ನಮಗೆ ವಿಧ್ಯುಕ್ತ ಸ್ವಾಗತವನ್ನು ನೀಡುತ್ತಾರೆ. ಇವುಗಳಲ್ಲಿ, ಮುಖ್ಯ ದ್ವಾರದ ಬಲಕ್ಕೆ ಸವಾರಿ ಮಾಡುತ್ತಿರುವ ಸವಾರನು ಅತ್ಯಂತ ಆಸಕ್ತಿಯನ್ನು ಹುಟ್ಟಿಸುತ್ತಾನೆ.
15 ಮತ್ತು 16ನೆಯ ಶತಮಾನಗಳ ತುರ್ಕಿಕ್, ಪರ್ಷಿಯನ್ ಮತ್ತು ಅರೇಬಿಕ್ ಅಶ್ವಸೈನಿಕರಿಗೆ ನಿರ್ದಿಷ್ಟವಾದ ಶಸ್ತ್ರಸಜ್ಜಿತವಾದ, ಮೊಳಕಾಲಿನವರೆಗೆ ಬರುವ 'ಗೊಂಗಡಿ ಕಝಗಂದ್' ನಿಲುವಂಗಿಯನ್ನು ಈ ಸವಾರನು ಧರಿಸಿದ್ದಾನೆ.