ಮಹಾಭಾರತದ ಕಿರಾತಾರ್ಜುನೀಯ ಕಥೆಯು ಪಾಂಡವ ಅರ್ಜುನ ಮತ್ತು ಬೇಟೆಗಾರ ಕಿರಾತನ ವೇಷದಲ್ಲಿರುವ ಭಗವಾನ್ ಶಿವನ ನಡುವಿನ ಕಾಳಗವನ್ನು ವಿವರಿಸುತ್ತದೆ. ಮಧ್ಯಕಾಲೀನ ಬರಹಗಾರರು ಹಾಗೂ ಶಿಲ್ಪಿಗಳಲ್ಲಿ ಜನಪ್ರಿಯ ನಿರೂಪಣೆಯಾದ ಈ ಕಥೆಯನ್ನು ಮುಖ್ಯ ದೇಗುಲದ ಪೂರ್ವದ ಮುಂಭಾಗದಲ್ಲಿ ವಿಭಜಿಸಲಾಗಿದೆ.
ನೀವು ಪ್ರವೇಶಿಸಿದಾಗ ನಿಮ್ಮ ಎಡಭಾಗದಲ್ಲಿ ಕಥೆಯು ಗೋಡೆಯ ದಕ್ಷಿಣ ತುದಿಯಲ್ಲಿ ಪ್ರಾರಂಭವಾಗುತ್ತದೆ. ಉದ್ದನೆಯ ಗಡ್ಡ ಮತ್ತು ಜಡೆ ಹಾಕಿದ ಕೂದಲಿನ ಅರ್ಜುನನು ಕೈಯೆತ್ತಿ ಒಂದು ಕಾಲಿನ ಮೇಲೆ ನಿಂತು, ತಪಸ್ಸಿನಲ್ಲಿ ಆಳವಾಗಿ ಮಗ್ನನಾಗಿದ್ದಾನೆ. ಗೂಡಿನ ಇನ್ನೊಂದು ಬದಿಯಲ್ಲಿ ಹಂದಿ ಮೂಕಾಸುರ ಅರ್ಜುನನ ತಪಸ್ಸಿಗೆ ಭಂಗ ತರುತ್ತದೆ.