Rotate your device!

ದೇವಾಲಯದ ಅತ್ಯಂತ ಹಳೆಯ ಭಾಗವೆಂದರೆ ಒಳಗಿನ ಗರ್ಭಗೃಹ, ಮುಖಮಂಟಪ ಮತ್ತು ನವರಂಗ ಮಂಟಪ - ಕಂಬಗಳಿರುವ ಒಂದು ಸಣ್ಣ ಹಜಾರ . ದೇವಾಲಯದ ಉಳಿದ ಭಾಗಗಳಿಗಿಂತ ಅವು ವಿಭಿನ್ನ ಶೈಲಿಯನ್ನು ಪ್ರದರ್ಶಿಸುತ್ತವೆ ಮತ್ತು ಸುಮಾರು 10 - 12ನೆಯ ಶತಮಾನದ CE ಯ ಚೋಳರ ಕಾಲದ್ದು ಎಂದು ಹೇಳಬಹುದು.

ಎರಡನೆಯ ಹಂತದ ನಿರ್ಮಾಣದ ಸಮಯದಲ್ಲಿ, ದೇವಾಲಯದ ಒಳಭಾಗದ ಸುತ್ತಲೂ ಏಕಕೇಂದ್ರಿಯ ಮಾರ್ಗವನ್ನು ನಿರ್ಮಿಸಲಾಯಿತು. ಈ ಪ್ರದಕ್ಷಿಣಾ ಪಥದ ಸೇರ್ಪಡಿಕೆಯ ಕಾರಣದಿಂದ ನೆಲದ ಮಟ್ಟವು ಏರಿಕೆಯಾಗಿ, ಅದರ ಕೆಳಗಿನ ಮೂಲ ದೇಗುಲದ ಪ್ರನಾಳವನ್ನು (ನೀರಿನ ಚಿಲುಮೆ/ ನೀರಸುಳಿಗಂಬ) ಸೀಮಿತಗೊಳಿಸಿತು.

1500 ಅಥವಾ 1600 ರ ಅವಧಿಯಲ್ಲಿ, ಮಹಾ ಮಂಟಪವನ್ನು ಸೇರಿಸಲಾಯಿತು. ಇದು ವಿಸ್ತೃತವಾಗಿ ಕೆತ್ತಿದ ಶಿಲ್ಪಗಳು ಮತ್ತು ಯಾಳಿಗಳೊಂದಿಗೆ ಅದ್ಭುತವಾದ ಕಲ್ಲಿನ ಸ್ತಂಭಗಳನ್ನು ಹೊಂದಿದ್ದು, ಪಾಳುಬಿದ್ದ ಹಳೆಯ ಹಂಪಿ ನಗರದಲ್ಲಿ ಇರುವ ಅನುಭವವನ್ನು ಇದು ನಮಗೆ ಕೊಡುತ್ತದೆ.

ಮಹಾಮಂಡಪವು ನಿರ್ಮಾಣವಾದ ಆಸುಪಾಸಿನ ಕಾಲಘಟ್ಟದಲ್ಲಿ ಶಿಲ್ಪಗಳ ಒಂದು ದೊಡ್ಡ ಶ್ರೇಣಿಯನ್ನು ಹೊಂದಿರುವ ಗೋಪುರ, ಮತ್ತು ಕಲ್ಯಾಣಿಯೂ ಕೂಡ ರಚನೆಯಾಗಿರಬಹುದು.

ಈ ಪ್ರದೇಶವು ಮೈಸೂರಿನ ಒಡೆಯರ್ ಆಳ್ವಿಕೆ ಅಡಿಯಲ್ಲಿ ಇದ್ದಾಗ ಕಟ್ಟಲಾದ ಕಾಮಾಕ್ಷಿ ದೇಗುಲವು ಪ್ರಾಯಶಃ 17 ಅಥವಾ 18ನೆಯ ಶತಮಾನಕ್ಕೆ ಸೇರಿದ್ದಾಗಿದೆ.

ದೇವಾಲಯದ ಸಂಕೀರ್ಣದ ವಾಸ್ತುಶಿಲ್ಪದ ವಿಕಸನ

ವಿವರಣೆ - ಹಲವಾರು ಶತಮಾನಗಳಲ್ಲಿ, ದೇವಾಲಯವು ಅದರ ಪ್ರಸ್ತುತ ಭವ್ಯವಾದ ರೂಪವನ್ನು ತಲುಪಲು ವಿಸ್ತರಣಗೊಂಡು, ವಿಕಸಿತವಾಯಿತು.