ಹಂಪಿಯಲ್ಲಿರುವಂತೆ, ಸೋಮೇಶ್ವರ ದೇಗುಲದಲ್ಲಿಯೂ ಕೂಡ, ಗಂಗಾ ದೇವಿಯನ್ನು ಸಾಲಭಂಜಿಕೆ ಅಥವಾ 'ಸೌಂದರ್ಯ-ಬಳ್ಳಿ', ಲತಾಸುಂದರಿಯಂತೆ ಚಿತ್ರಿಸಲಾಗಿದೆ. ಹೊರಕ್ಕೆ ಚಾಚಿದ ಬಲಗಾಲನ್ನು ಭಾರ ಹೊರುವ ಎಡಗಾಲಿನ ಮೇಲೆ ಅಡ್ಡಲಾಗಿ ಇರಿಸಿ, ಮಕರಕ್ಕೆ ಬಿಗಿದ ವಿಶೇಷವಾಗಿ ನಿರ್ಮಿತವಾದ ಪಾದಪೀಠದ ಮೇಲೆ ನಯನಾಜೂಕಿನಿಂದ ದೇವಿಯು ನಿಂತಿದ್ದಾಳೆ.

ಅವಳು ಚಿಕ್ಕದಾದ ಪಂಚೆಯಂತಹ ಕೆಳಗಿನ ಉಡುಪನ್ನೂ, ಕುಚ್ಚುಗಳುಳ್ಳ ಎದೆಪಟ್ಟಿಯನ್ನು ಧರಿಸಿ, ಅದಕ್ಕೆ ಹೊಂದುವಂತೆ ರತ್ನ-ಖಚಿತವಾದ ಆಭರಣಗಳ ಅಲಂಕಾರವನ್ನು ಪ್ರದರ್ಶಿಸುತ್ತಾಳೆ.

ತನ್ನ ತಲೆಗೆ ಕಳಶಪ್ರಾಯವೆಂಬ ಹಾಗೆ, ಅಲಂಕಾರಿಕ ಜೋಡಿ ಪಟ್ಟಿಗಳಿಂದ ಅಲಂಕೃತವಾದ ತನ್ನ ಕೂದಲನ್ನು ಎತ್ತರದ ತುರುಬಿನ ರೂಪದಲ್ಲಿ ಕಟ್ಟಿದ್ದಾಳೆ.

ತನ್ನ ಬಲಗೈಯಿಂದ, ನದಿ ದೇವಿಯು ದೊಡ್ಡದಾಗಿ ತೆರೆದ ಮಕರದ ಬಾಯಿಯಿಂದ ಹೊರಹೊಮ್ಮಿದ ಅಂಕುಡೊಂಕಾದ ಬಳ್ಳಿಯನ್ನು ಅಪ್ಪಿಕೊಂಡಿದ್ದು, ಬಳ್ಳಿಯು ಅವಳ ತೆಳ್ಳನೆಯ ಲಾವಣ್ಯಕ್ಕೆ ರೂಪಕವಾಗಿದೆ.

ಬಳ್ಳಿಯು ಅವಳ ತಲೆಯ ಮೇಲೆ ಟಿಸಿಲೊಡೆದು ಕೊಂಬೆಗಳನ್ನು ಹೊಂದಿದ್ದು, ಒಂದು ಕೊಂಬೆಯು ಪುಷ್ಪವೃಷ್ಟಿಯನ್ನು ಚೆಲ್ಲುವ ಹೂವಿನ ಮಾಲೆಯಾಗಿ ಕೆಳಗಿಳಿದು, ಅವಳ ಎಡತೋಳಿಗೆ ಸುತ್ತಿಕೊಂಡಿದೆ, ಮತ್ತೊಂದು ವಿಜೃಂಭಣೆಯಿಂದ ಕವಲೊಡೆದ ಸಂಕೀರ್ಣ ವಿನ್ಯಾಸದ ಹೆಣೆದ ಎಲೆಗಳನ್ನು ಅನುಕರಿಸುವ ಆಭರಣದಂತೆ ಮೇಲಕ್ಕೆ ಏರುತ್ತದೆ.

ಹಲಸೂರಿನ ಲತಾಸುಂದರಿಯರು

15ನೆಯ ಹಾಗೂ 16ನೆಯ ಶತಮಾನದ ನಂತರ, ದೇಗುಲಕ್ಕೆ ಹೋಗುವ ಎರಡು ಬಾಗಿಲು ಚೌಕಟ್ಟುಗಳ ಒಳ ಗೋಡೆಗಳ ಮೇಲೆ ವಿಜಯನಗರ ಗೋಪುರಗಳು ಗಂಗಾ ದೇವಿಯ ಶಿಲ್ಪಗಳನ್ನು ಪ್ರಮುಖವಾಗಿ ತೋರಿಸಲು ಪ್ರಾರಂಭಿಸಿದವು.