ನೀವು ದೇವಾಲಯದ ಒಳಗಿನ ಪ್ರದಕ್ಷಿಣೆಯ ಪಥವನ್ನು ಪ್ರವೇಶಿಸುವ ಮೊದಲು, ನಿಮ್ಮ ಎಡಕ್ಕೆ, ಲಂಕೆಯ ರಾಜನಾದ ಹತ್ತು ತಲೆಯ ರಾವಣನು, ತನ್ನ ಇಪ್ಪತ್ತು ತೋಳುಗಳ ಪೈಕಿ, ಎರಡು ತೋಳುಗಳಿಂದ ಕೈಲಾಸ ಪರ್ವತವನ್ನು ಎತ್ತುತ್ತಿರುವ ಜೀವಂತ ಉಬ್ಬು ಚಿತ್ರಣವನ್ನು ಕಾಣುವಿರಿ. ಫಲಕದ ಮೇಲೆ ಆವರಿಸಿಕೊಂಡ/ರಾರಾಜಿಸುತ್ತಿರುವ ರಾಕ್ಷಸ-ರಾಜನು ತ್ರಿಭಂಗ ಭಂಗಿಯಲ್ಲಿ ನೃತ್ಯ ಮಾಡುತ್ತ, ತನ್ನ ತೋಳುಗಳನ್ನು ಗಿರಗಿರನೆ ತಿರುಗುವ ಫ್ಯಾನಿನ ಬ್ಲೇಡುಗಳಂತೆ ಮೇಲಕ್ಕೆ ಚಾಚಿದ್ದಾನೆ.
ಪುರಾಣ ಕಥೆಯ/ಐತಿಹ್ಯದ ಪ್ರಕಾರ, ರಾವಣನು ಒಮ್ಮೆ ತನ್ನ ವಾಹನವಾದ ಪುಷ್ಪಕ ವಿಮಾನದಲ್ಲಿ ಹಾರುತ್ತಿದ್ದಾಗ ಅಡಚಣೆಯನ್ನು ಎದುರಿಸಿದನು - ಅದು ಯಾವುದೆಂದರೆ ಶಿವ-ಪಾರ್ವತಿಯರ ವಾಸಸ್ಥಾನವಾದ ಅತ್ಯಂತ ಎತ್ತರದ ಕೈಲಾಸ ಪರ್ವತ. ಇದರಿಂದ ಕೋಪಗೊಂಡ ರಾವಣನು ತನ್ನ ಪ್ರಬಲವಾದ ತೋಳುಗಳಿಂದ ಪರ್ವತವನ್ನು ಎತ್ತಿದನು.