ಜೀವಿಗಳ ಶ್ರೇಣಿ

ಸೋಮೇಶ್ವರ ದೇಗುಲದ ಜಗತ್ತು

ಸೋಮೇಶ್ವರ ದೇವಾಲಯದೊಳಗೆ ದೇವರುಗಳು, ಗಂಧರ್ವರು, ಮಿಶ್ರತಳಿ ಪ್ರಾಣಿಗಳು, ಸಂತರು ಮತ್ತು ತಪಸ್ವಿಗಳು, ನೃತ್ಯಗಾರರು, ಸಂಗೀತಗಾರರು, ದೊಂಬರಾಟದವರು, ಪ್ರಾಣಿಗಳು, ಪವಿತ್ರ ಮರಗಳು, ಗಣಗಳು ಮತ್ತು ಹಾವುಗಳ ವಿಸ್ಮಯಕಾರಿ ಜಗತ್ತು ಇದೆ. ದೇವಾಲಯದ ಗೋಪುರ, ಗೋಡೆಗಳು ಮತ್ತು ಮೇಲಂತಸ್ತು ತೆರೆದ ಮಹಾಮಂಟಪ, ಪ್ರದಕ್ಷಿಣ ಪಥ ಮತ್ತು ಒಳಗಿನ ನವರಂಗ ಮಂಟಪವು ತಗ್ಗು ಮತ್ತು ಮಧ್ಯದ ಉಬ್ಬು ಚಿತ್ರಣಗಳ ಭಾವಪೂರ್ಣ ಶಿಲ್ಪಗಳನ್ನು ಹೊಂದಿದೆ. ಕೇವಲ ಮಹಾಮಂಟಪದ ಸ್ತಂಭಗಳ ಮೇಲೆ 500ಕ್ಕೂ ಹೆಚ್ಚು ಉಬ್ಬು ಶಿಲ್ಪಗಳು ಸಡಗರದ ವಾತಾವರಣವನ್ನು ಸೃಷ್ಟಿಸುತ್ತವೆ. ಪ್ರತಿಯೊಂದು ಕಂಭವೂ ಒಂದು ದೃಶ್ಯಾಶ್ಚರ್ಯವನ್ನು ಮುಂದಿಡುತ್ತದೆ. ಬಹುತೇಕ ಕಂಭಗಳ ಕೆಳಭಾಗದಲ್ಲಿ ಕುಳಿತಿರುವ ಸಿಂಹಗಳ ಕೆತ್ತನೆಗಳಿದ್ದು, ಮಧ್ಯ ಮತ್ತು ಮೇಲಿನ ಭಾಗಗಳಲ್ಲಿನ ಚಿತ್ರಣಗಳು ಸಾಮಾನ್ಯವಾಗಿ ಕಲ್ಪನೆಗೂ ಮೀರಿದ ಚಿತ್ರಣಗಳನ್ನು ಹೊಂದಿರುತ್ತವೆ - ಮುಂದಿನ ಶಿಲ್ಪವು ಕೋತಿ, ತಪಸ್ವಿ, ದೇವರು ಅಥವಾ ಮಿಶ್ರತಳಿ ಪ್ರಾಣಿ ಇರಬಹುದೇ?

ಈಗ ಹಂಚಿಕೊಳ್ಳಿ