ದೇವರುಗಳು

ಸೋಮೇಶ್ವರ ದೇಗುಲದ ಜಗತ್ತು

ಪವಿತ್ರವಾದ ಶ್ರೀಚಕ್ರದ ಹಿಂದೆ ಕಲ್ಲಿನ ಲಿಂಗ ಮತ್ತು ಕಾಮಾಕ್ಷಿಯ ಆಕರ್ಷಕವಾದ ಕಲ್ಲಿನ ಪ್ರತಿಮೆಗಳು ದೇವಾಲಯ ಸಂಕೀರ್ಣದ ಎರಡು ಮುಖ್ಯ ದೇವಾಲಯಗಳಲ್ಲಿ ಸ್ಥಾಪಿತವಾಗಿದೆ. ಈ ದೇವಾಲಯವು ಉಪದೇವತೆಗಳು, ಲಿಂಗಗಳು, ಹನುಮಾನ್ ಮತ್ತು ನವಗ್ರಹ ಸಮೂಹದೊಂದಿಗೆ ಹಲವಾರು ಉಪಮಂದಿರಗಳನ್ನು ಹೊಂದಿದೆ. ಉತ್ಸವಗಳಿಗೆಂದು ತೆಗೆದುಕೊಂಡು ಹೋಗುವ ಕಂಚಿನ ಮೆರವಣಿಗೆಯ ದೇವತೆಗಳು ಮತ್ತು ಹಿತ್ತಾಳೆಯ ಕವಚಗಳ ಸಣ್ಣ, ಹೊಳೆಯುವ ಸಂಗ್ರಹವನ್ನು ಗರ್ಭಗುಡಿಯ ಪಕ್ಕದ ಕೋಣೆಯಲ್ಲಿ ಸಂಗ್ರಹಿಸಲಾಗಿದೆ. ಶಿವ, ಪಾರ್ವತಿ, ವಿಷ್ಣು, ಲಕ್ಷ್ಮಿ ಮತ್ತು ಗಣೇಶನ ಹಲವಾರು ಸ್ವರೂಪಗಳ ಉಬ್ಬು ಶಿಲ್ಪಗಳು ದೇವಾಲಯದ ಮಂಟಪದ ಕಂಭಗಳು, ಗೋಡೆಗಳು, ಗೋಪುರ ಮತ್ತು ವಿಮಾನಗಳನ್ನು ಅಲಂಕರಿಸಿವೆ. ಶಿವನು, ನರ್ತಿಸುವ ನಟರಾಜ, ಉಗ್ರ ವೀರಭದ್ರ, ಇಂದ್ರಿಯಾತೀತ ಮೃತ್ಯುಂಜಯ ಮತ್ತು ಆಕರ್ಷಕ ವಿವಾಹಿತ ಉಮಾಸಹಿತ ಶಿವನಾಗಿ ಕಾಣಿಸಿಕೊಳ್ಳುತ್ತಾನೆ. ಬೆಣ್ಣೆ ಕದಿಯುತ್ತಿರುವ ಬಾಲಕೃಷ್ಣ, ಕಾಳಿಂಗ ಸರ್ಪದೊಂದಿಗೆ ಸೆಣೆಸಾಟ, ಗೋವರ್ಧನ ಗಿರಿಯನ್ನು ಎತ್ತುವುದನ್ನು ಚಿತ್ರಿಸುವ ಶಿಲ್ಪಗಳು ಶಿಲ್ಪಿಗಳ ಅಚ್ಚುಮೆಚ್ಚಿನ ವಸ್ತುವಿಷಯವಾಗಿದೆ.

ಈಗ ಹಂಚಿಕೊಳ್ಳಿ