ಇತರ ದೇವತೆಗಳು

ಸೋಮೇಶ್ವರ ದೇಗುಲದ ಜಗತ್ತು

ಚಂದ್ರ ದೇವನು ಪ್ರವೇಶ ಸ್ತಂಭದ ಮೇಲಿನ ವಿಭಾಗದಲ್ಲಿರುವ ಮೋಡದ ಮೇಲೆ ತೇಲುತ್ತಿದ್ದಾನೆ. ಸ್ವರ್ಗಲೋಕದ ಅರ್ಧ-ಪಕ್ಷಿ ಅರ್ಧ-ಮಾನವ ಸಂಗೀತಗಾರರಾದ ಕಿನ್ನರರು ಮತ್ತು ಕಿನ್ನರಿಯರು ತಮ್ಮ ಹಾಡಿನ ಮೂಲಕ ಪ್ರತಿಷ್ಠಾಪಿತ ದೇವತೆಯನ್ನು ಸ್ತುತಿಸುತ್ತಾರೆ. ಕುಬೇರನ ನಿಧಿಯ ಕುಬ್ಜ ರಕ್ಷಕರಾದ ಶಂಖ ನಿಧಿ ಮತ್ತು ಪದ್ಮ ನಿಧಿ ಕ್ರಮವಾಗಿ ಶಂಖ ಮತ್ತು ಕಮಲವನ್ನು ಹಿಡಿದಿದ್ದಾರೆ. ಅವರು ಶುಭ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತಾರೆ. ಋಷಿ ವ್ಯಾಘ್ರಪಾದನು ಶಿವನಿಗೆ ಹೂವಿನ ನಿವೇದನೆಯನ್ನು ಮಾಡುವ ಸಲುವಾಗಿ ಬಂಡೆಗಳು ಹಾಗೂ ಗಿಡ-ಗಂಟೆಗಳ ನಡುವೆ ಹುಡುಕಾಡಲು ಹೆಚ್ಚು ಸೂಕ್ತವಾದ ಕಾಲುಗಳು ಹಾಗೂ ಪಾದಗಳನ್ನು ನೀಡುವಂತೆ ಶಿವನನ್ನು ವರ ಕೇಳಿದನೆಂದು ಹೇಳಲಾಗುತ್ತದೆ (ವ್ಯಾಘ್ರ, ಹುಲಿ + ಪಾದ, ಕಾಲುಗಳು).

ಈಗ ಹಂಚಿಕೊಳ್ಳಿ