ದೇವರುಗಳು ಮತ್ತು ಗಂಧರ್ವರು, ತಪಸ್ವಿಗಳು ಮತ್ತು ಮಿಶ್ರತಳಿ ಪ್ರಾಣಿಗಳೊಂದಿಗೆ ಬೆರೆತ ಬಹುಸಂಖ್ಯೆಯ, ತಮ್ಮ ಹಲವಾರು ಮಧ್ಯಕಾಲೀನ ವ್ಯಾಪಾರಗಳಲ್ಲಿ ತೊಡಗಿರುವ ಸಾಮಾನ್ಯ ಜನರನ್ನು ಸೋಮೇಶ್ವರ ದೇಗುಲದಲ್ಲಿ ಕಾಣಬಹುದು, ಸಂಗೀತಗಾರರು ವಿವಿಧ ವಾದ್ಯಗಳನ್ನು ನುಡಿಸುವಾಗ, ತೂಗಾಡುತ್ತಾ ಕುಣಿಯುವ ಚೆಂಡೆವಾದಕರ ಲಯಕ್ಕೆ ಅಂಗಸನ್ನೆ ಮಾಡುವ ಮತ್ತು ಕೋಲಾಟ ಆಡುತ್ತಿರುವ ನೃತ್ಯಗಾರರು. ಕುಂಬಾರನು ತನ್ನ ಭಾಗಶಃ ಒಣಗಿದ ಮಡಕೆಯನ್ನು ಹುಟ್ಟುಗಾಲಿಯಲ್ಲಿ ಇಟ್ಟು ತಿರುಗಿಸುತ್ತಾನೆ. ದೊಂಬರಾಟದವರು ಏಕಕಾಲದಲ್ಲಿ ಚಕ್ರಾಕಾರವಾಗಿ ಉರುಳಿದರೆ, ಮಹಿಳಾ ವ್ಯಾಯಾಮಪಟು ತಲೆಕೆಳಗಾದ ಚೇಳಿನ ಭಂಗಿಯನ್ನು ಹಿಡಿದಿದ್ದಾಳೆ. ಜೇಷ್ಠಿ ಕುಸ್ತಿಪಟುಗಳು ಪ್ರೇಕ್ಷಕರಿಗಾಗಿ ಪ್ರದರ್ಶನ ನೀಡುತ್ತಾರೆ. ಹಾವಾಡಿಗನು ತನ್ನ ಬುಟ್ಟಿಯಿಂದ ಹೊರತೆಗೆಯುತ್ತಿರುವ ನಾಗರಹಾವನ್ನು ಮಂತ್ರಮುಗ್ಧಗೊಳಿಸಲು ಪುಂಗಿ ಊದುತ್ತಾನೆ. ತಾನು ಕೊಂದ ಹುಲ್ಲೆ ಯನ್ನು ಬೇಟೆಗಾರನೊಬ್ಬನು ಹೆಗಲಿಗೇರಿಸಿ ನಡೆಯುತ್ತಾನೆ.